Breaking
20 Sep 2026, Sun

ಪಟ್ಟಣದ ಕಾವೇರಿ ಕಾಲೇಜು ಬಳಿ ಯುವಕನನ್ನು ಅಪಹರಿಸಿ, ಥಳಿಸಿ ಬೈಕ್ ಹಾಗೂ ಮೊಬೈಲ್ ಕಸಿದು ಪರಾರಿಯಾದ ಖದೀಮರು

ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕನನ್ನ ಕಿಡ್ನಾಪ್ ಮಾಡಿದ ಕಿರಾತಕರ ಗುಂಪೊಂದು ಮನಸೋ ಇಚ್ಛೆ ಹಲ್ಲೆ ಮಾಡಿ ಆತನ ಬಳಿ ಇದ್ದ ಮೊಬೈಲ್ ಹಾಗೂ ದ್ವಿಚಕ್ರವಾಹನವನ್ನು ಕದ್ದು ಪರಾರಿಯಾಗಿದ್ದಾರೆ. ಆನೇಕಲ್ ಪಟ್ಟಣದ ಕಾವೇರಿ ಕಾಲೇಜು ಸಮೀಪ ಇಂದು ಘಟನೆ ನಡೆದಿದೆ. ಮುರಳಿ ಎಂಬ ಯುವಕ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಆನೇಕಲ್‌ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾರಿನಲ್ಲಿ ಬಂದ ಆರು ಜನರ ಗುಂಪು ಈತನನ್ನ ಕಿಡ್ನಾಪ್ ಮಾಡಿ ವಿಕೃತವಾಗಿ ಹಿಂಸೆ ಮಾಡಿ ಬಳಿಕ ಆತನ ಮೊಬೈಲ್ ಹಾಗೂ ಬೈಕ್ ಕಳ್ಳತನ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ

Leave a Reply