Breaking
21 Sep 2026, Mon

ವಿವೇಕನಗರ ಸಮೀಪ ಕ್ಷುಲಕ ಕಾರಣಕ್ಕೆ ಕಾರಿನ ಬ್ಯಾನೆಟ್ ಮೇಲೆ ಹತ್ತಿ ದಾಂದಲೆ ಮಾಡಿದ್ದ ಯುವಕರ ಬಂಧನ.

ಬೆಂಗಳೂರಿನ ವಿವೇಕನಗರ ಸಮೀಪ ಕ್ಷುಲ್ಲಕ ಕಾರಣಕ್ಕೆ ಕಾರಿನ ಬಾನೆಟ್ ಮೇಲೆ ಹತ್ತಿ ದಾಂಧಲೆ ಮಾಡಿದ್ದ ಇಬ್ಬರು ಯುವಕರನ್ನ ಪೊಲೀಸರು ಬಂಧಿಸಿದ್ದಾರೆ. ಸುಧೀರ್ ಹಾಗೂ ಧನುಷ್ ಬಂದಿತ ಆರೋಪಿಗಳು, ಕ್ಷುಲಕ ಕಾರಣಕ್ಕೆ ರಸ್ತೆಯಲ್ಲಿ ನಿಂತಿದ್ದ ಕಾರಿನ ಮೇಲೆ ಹತ್ತಿದ್ದ ಕಿಡಿಗೇಡಿಗಳು ಕಾರಿನ ಮುಂಭಾಗದ ಗಾಜು ಒಡೆದು ದಾಂಧಲೆ ಮಾಡಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡ ವಿವೇಕ ನಗರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Leave a Reply