Breaking
20 Sep 2026, Sun

ಚಾಮರಾಜಪೇಟೆಯಲ್ಲಿ ಪರಿಹಾರವಾಗಿ ಮೂರು ಹಸುಗಳನ್ನು ಮಾಲೀಕರಿಗೆ ಕೊಟ್ಟ ಜಮೀರ್ ಅಹ್ಮದ್

ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆಗೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ರವರು ಜಾನುವಾರುಗಳ ಮಾಲೀಕರಿಗೆ ಇಂದು ಮೂರು ಹಸುಗಳನ್ನು ನೀಡಿದ್ದಾರೆ.

ಗಾಯಗೊಂಡಿದ್ದ ಹಸುವಿನ ಮಾಲೀಕರಾಗಿರುವ ಕರ್ಣನ ತಾಯಿ, ಸವಾರಿ ಅಮ್ಮಾಳ್ ಮತ್ತು ಅವರ ಸಹೋದರಿ ಅಮುದಾ ಅವರಿಗೆ 3 ಲಕ್ಷ ರೂಪಾಯಿ ಮೌಲ್ಯದ 3 ಹೊಸ ಹಸುಗಳನ್ನು ಜಮೀರ್ ಅಹ್ಮದ್ ಖಾನ್ ಕೊಟ್ಟಿದ್ದಾರೆ.

ಚಾಮರಾಜಪೇಟೆಯ ವಿನಾಯಕನಗರ ಪ್ರದೇಶದಲ್ಲಿ ಬಿಹಾರದ ಚಂಪಾರಣ್ ಮೂಲದ ಶೇಖ್ ನಸ್ರು ಎಂಬಾತ ಹಸು ಕೆಚ್ಚಲು ಕತ್ತರಿಸಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಶೇಖ್ ನಸ್ರು ಎಂಬಾತನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 325 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ

Leave a Reply