Breaking
29 Mar 2026, Sun

ಸೂಟ್ಕೇಸ್ ನಲ್ಲಿ ಅಪರಿಚಿತ ಯುವತಿಯ ಶವ ಪತ್ತೆ

ನೀಲಿ ಬಣ್ಣದ ಸೂಟ್​ಕೇಸ್​ವೊಂದರಲ್ಲಿ 18 ವರ್ಷ ಅಸುಪಾಸಿನ ಅಪರಿಚಿತ ಯುವತಿಯ ಮೃತ ದೇಹವೊಂದು ಪತ್ತೆಯಾಗಿದೆ. ಆನೇಕಲ್ ತಾಲೂಕಿನ ಹಳೆ ಚಂದಾಪುರ ಸಮೀಪದ ರೈಲ್ವೇ ಹಳಿ ಸೂಟ್ ಕೇಸಿನಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ

ಬೇರೆ ಕಡೆ ಯುವತಿಯನ್ನ ಕೊಲೆ ಮಾಡಿ ಮೃತ ದೇಹವನ್ನು ಸೂಟ್ ಕೇಸಿನಲ್ಲಿ ತುಂಬಿಕೊಂಡು ಇಲ್ಲಿ ತಂದು ಎಸೆಯಲಾಗಿದೆ ಎಂದು ಸೂರ್ಯ ಸಿಟಿ ಪೊಲೀಸರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಹಾಗೂ ಸೂರ್ಯ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ

ಸ್ಥಳಕ್ಕೆ ಸೂರ್ಯನಗರ ಠಾಣೆ ಪೊಲೀಸರು ಹಾಗೂ ಬಯ್ಯಪ್ಪನಹಳ್ಳಿ ರೈಲ್ವೇ ಸ್ಟೇಷನ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಾಲಕಿಗೆ ಸುಮಾರು ಒಂಬತ್ತು ವರ್ಷ ವಯಸ್ಸಾಗಿದೆ ಎಂದು ತಿಳಿದು ಬಂದಿದೆ. ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಬಾಲಕಿಯ ಚಹರೆ ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನೆ ಮಾಹಿತಿ ತಿಳಿದು, ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply