Breaking
20 Sep 2026, Sun

ಎಸ್ ಕೆ ಗೌರೀಶ್ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಆಯೋಜನೆ

ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ರಾಜ್ಯಾಧ್ಯಕ್ಷರು ಮತ್ತು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸಿಂಗೇನ ಅಗ್ರಹಾರ ಎಸ್.ಕೆ.ಗೌರೀಶ್ ರವರ ಹುಟ್ಟು ಹಬ್ಬ ಅಂಗವಾಗಿ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ವಿಶೇಷವಾಗಿ ಆಡಿಸೊನ್ನಟ್ಟಿಯ ಸಿಪಾನಿ ಸೇವಾ ಸದನದಲ್ಲಿ ಅನ್ನದಾಸೋಹ ಆಯೋಜನೆ. ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಭಿರ, ರಕ್ತದಾನ ಶಿಭಿರ. ಪೌರ ಕಾರ್ಮಿಕರಿಗೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸಮವಸ್ತ ವಿತರಣೆ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ. ಸರ್ಕಾರಿ ಆಸ್ಪತ್ತೆಯ ಆರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ವೃದ್ದರಿಗೆ ಕಂಬಳಿ ವಿತರಣೆ. ಮಹಿಳೆಯರಿಗೆ ಸೀರೆ ವಿತರಣೆ ಸೇರಿದಂತೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸಿಂಗೇನ ಅಗ್ರಹಾರ ಎಸ್.ಕೆ.ಗೌರೀಶ್ ರವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು. ಹಿತೈಷಿಗಳು ವಿಭಿನ್ನವಾಗಿ ಆಚರಿಸಿದರು.

ಇನ್ನು ಕಾರ್ಯಕ್ರಮದ ನೇತೃತ್ವವನ್ನು ಜಿಕೆ ವೈ ಬಾಯ್ಸ್ ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಯುವಕರ ಸಂಘ, ಗೌರೀಶಣ್ಣ ಅಭಿಮಾನಿ ಬಳಗ ಮತ್ತು ನಿಸರ್ಗ ಸೇವಾ ಟ್ರಸ್ಟ್ ಮತ್ತು ನೈನ್ (9) ಪಿಲ್ಲರ್ಸ್ ತಂಡದವರು ಮತ್ತು ಹಿತೈಷಿಗಳು ವಹಿಸಿದ್ದರು.

ಇನ್ನು ಇದೇ ಸಂಧರ್ಭದಲ್ಲಿ ಆನೇಕಲ್ ಕ್ಷೇತ್ರದ ಜನಪ್ರಿಯ ಶಾಸಕರಾದ ಬಿ.ಶಿವಣ್ಣ ರವರು ಸೇರಿದಂತೆ ಗಣ್ಯರು. ಹಿತೈಷಿಗಳು. ಜನಪ್ರತಿನಿಧಿಗಳು. ಸ್ನೇಹಿತರು ಮತ್ತು ಅಭಿಮಾನಿಗಳು ಎಸ್.ಕೆ. ಗೌರೀಶ್ ರವರಿಗೆ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸಿಹಿ ಹಂಚಿ ಶುಭ ಹಾರೈಸಿದರು.

Leave a Reply