Breaking
1 Apr 2026, Wed

ಕಮ್ಮಸಂದ್ರ ಅಗ್ರಹಾರ ಗ್ರಾಮದಲ್ಲಿ ನೂತನ ಅಂಬೇಡ್ಕರ್ ಭವನ ಹಾಗೂ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮ

ಆನೇಕಲ್ ತಾಲ್ಲೂಕಿನ ಕಮ್ಮಸಂದ್ರ ಅಗ್ರಹಾರ ಗ್ರಾಮದಲ್ಲಿ ನೂತನವಾಗಿ ಅಂಬೇಡ್ಕರ್ ಭವನ ಹಾಗೂ ಗ್ರಂಥಾಲಯದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆನೇಕಲ್ ಶಾಸಕ ಶಿವಣ್ಣ ಹಾಗೂ ಬ್ಯಾಗಡದೇನಹಳ್ಳಿ ಪಂಚಾಯಿತಿ ಸದಸ್ಯರಿಂದ ಅಂಬೇಡ್ಕರ್ ಭವನ ಹಾಗೂ ನೂತನ ಗ್ರಂಥಾಲಯ ಲೋಕಾರ್ಪಣೆ ಮಾಡಲಾಗಿದೆ

ಈ ಕುರಿತು ಮಾತನಾಡಿದ ಶಾಸಕ ಶಿವಣ್ಣ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ನೂತನ ಗ್ರಂಥಾಲಯ ಉಪಯೋಗವಾಗಬೇಕು. ನಾನು ಸಹ 5 ಲಕ್ಷ ಮೌಲ್ಯದ ಪುಸ್ತಕಗಳನ್ನ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡುವುದಾಗಿ ಶಾಸಕ ಶಿವಣ್ಣ ತಿಳಿಸಿದರು

ಅಂಬೇಡ್ಕರ್ ರವರು ಒಂದು ವರ್ಗ ಅಥವಾ ಜಾತಿಗೆ ಸೀಮೀತ ವ್ಯಕ್ತಿಯಲ್ಲ, ಭಾರತದ ಸಂವಿಧಾನವನ್ನ ರಚನೆ ಮಾಡಿ ತಳ ಸಮೂದಾಯಕ್ಕೆ ಮೀಸಲಾತಿ ನಿಡಿದ ಪರಿಣಾಮ ನಾವೆಲ್ಲ ಇಂದು ಜನಪ್ರತಿನಿಧಿಗಳಾಗಿ ಜನ ಸೇವೆ ಮಾಡಲು ಸಾಧ್ಯವಾಗಿದೆ. ಅಂಬೇಡ್ಕರ್ ರವರ ಶಿಕ್ಷಣ , ಸ‌ಂಘಟನೆ , ಹೋರಾಟವನ್ನ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ರೂಡಿಸಿಕೊಳ್ಳುವ ಮೂಲಕ ಅಂಬೇಡ್ಕರ್ ರವರ ಆಶಯಗಳನ್ನ ಎತ್ತಿ ಹಿಡಿಯಬೆಕೆಂದು ಜನರಿಗೆ ಕಿವಿಮಾತು ಹೇಳಿದರು. ಇದೇ ವೇಳೆ ಎಬಿಸಿ ಯಲ್ಲಪ್ಪ ಪೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಪರಿಕರಗಳನ್ನು ವಿತರಣೆ ಮಾಡಲಾಯಿತು.

Leave a Reply