Breaking
4 Jun 2025, Wed

ಈ ಶಕ್ತಿ ಗಣಪತಿ ದೇವಾಲಯದ ಮೊದಲನೇ ವರ್ಷದ ವಾರ್ಷಿಕೋತ್ಸವದ ಪೂಜಾ ಕಾರ್ಯಕ್ರಮ.

ಶ್ರೀ ಶಕ್ತಿ ಗಣಪತಿ ದೇವಾಲಯದಲ್ಲಿ ಮೊದಲನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ವಿಷೇಶ ಪೂಜಾ ಕಾರ್ಯಕ್ರಮಗಳನ್ನು ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಹಾಗೂ ಸುತ್ತ- ಮುತ್ತಲ ಭಕ್ತಾದಿಗಳಿಂದ ವಿಜೃಂಬಣೆಯಿಂದ ಬಾನುವಾರ ನೆರವೇರಿಸಲಾಯಿತು. ಬೆಳಗ್ಗೆ 8:00 ಗಂಟೆಗೆ ಪ್ರಾರಂಭವಾದ ಮಹಾಗಣಪತಿ, ನವಗ್ರಹ ಅಶ್ವತನಾರಾಯಣ ದೇವರುಗಳಿಗೆ ಪಂಚಾಮೃತ ಅಭಿಷೇಕ, ಮಹಾ ಗಣಪತಿ ಹೋಮ ನವಗ್ರಹ, ಮೃತ್ಯುಂಜಯ, ಲಕ್ಷ್ಮೀನಾರಾಯಣ ಹೋಮ ಮತ್ತು ಮಹಾ ಪೂರ್ಣಾವತಿ ಮಹಾಮಂಗಳಾರತಿ ಕೈಂಕರ್ಯಗಳು ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಗೋಲ್ಡನ್ ಗೇಟ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿತ್ತು.ಇದೇ ಸಂಧರ್ಭದಲ್ಲಿ ನೂರಾರು ಜನ ಭಕ್ತಾದಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.ಅರ್ಚಕರಾದ ನವೀನ್ ಶರ್ಮ,ಕುಮಾರ್ ಶರ್ಮ,ಹರಿಶರ್ಮ ನೇತ್ವತ್ವದಲ್ಲಿ ಮಾಡಲಾಯಿತು.

Leave a Reply