Breaking
25 May 2026, Mon

ಆನೇಕಲ್ ನಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವರ ಹಸಿ ಕರಗ ಮಹೋತ್ಸವ, ಸಾವಿರಾರು ಭಕ್ತಾದಿಗಳಿಂದ ಕರಗ ವೀಕ್ಷಣೆ

ಆನೇಕಲ್‌ ಪಟ್ಟಣದ ಐತಿಹಾಸಿಕ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಹಸಿ ಕರಗ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆ 4 ಗಂಟೆಗೆ ದೇವಾಲಯದಿಂದ ಹೊರಟ ಹಸಿ ಕರಗ ಆನೇಕಲ್‌ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಕರಗ ಹೋದ ಕಡೆಯಲೆಲ್ಲ ಮಹಿಳೆಯರು ಕರಗಕ್ಕೆ ಮಲ್ಲಿಗೆ ಹೂವು ಹಾಕಿ ಅದ್ದೂರಿಯಾಗಿ ಬರಮಾಡಿಕೊಂಡರು.

ನಾದಸ್ವರದ ನಾದಕ್ಕೆ ತಕ್ಕಂತೆ ಕರಗ ಹೆಜ್ಜೆ ಹಾಕಿ ಭಕ್ತಾದಿಗಳ ಭಕ್ತಿ ಭಾವಕ್ಕೆ ಸಾಕ್ಷಿಯಾಯಿತು. ಹಸಿ ಕರಗ ಹಿನ್ನೆಲೆ ದೇವರ ಪಲಕ್ಕಿ ಉತ್ಸವ ಸಹ ಆಯೋಜಿಸಲಾಗಿತ್ತು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply