Breaking
20 Sep 2026, Sun

ಆನೇಕಲ್‌ ಪಟ್ಟಣದಲ್ಲಿ ಏಪ್ರಿಲ್ 12ರಂದು ಹಸಿ ಕರಗ ನಡೆಸಲು ಸಕಲ ಸಿದ್ಧತೆ, ಮುಖ್ಯ ರಸ್ತೆಗಳಲ್ಲಿ ದೇವರ ಉತ್ಸವ ಆಯೋಜನೆ

ಆನೇಕಲ್‌ ಪಟ್ಟಣದ ಐತಿಹಾಸಿಕ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಏಪ್ರಿಲ್ 12ರಂದು ಹಸಿಕರಗ ಹಾಗೂ ಏಪ್ರಿಲ್ 15ರಂದು ಒಣ ಕರಗ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ .

ಇಂದು ಶ್ರೀ ಧರ್ಮರಾಯಸ್ವಾಮಿ ಹಾಗೂ ದೌಪದಿ ದೇವಿಯ ಮೂರ್ತಿಗಳನ್ನ ಆನೇಕಲ್‌ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ದೇವಾಲಯದ ಸುತ್ತಲೂ ವಿಶೇಷ ದೀಪದ ಅಲಂಕಾರ ಮಾಡಲಾಗುತ್ತಿದೆ.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply