ಆನೇಕಲ್ ತಾಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋನಸಂದ್ರ ಬಳಿ ಮೂಲ ಸ್ವರೂಪವನ್ನು ಕಳೆದುಕೊಂಡಿದ್ದ ಗೋಕುಂಟೆಯ ಪುನಶ್ಚೇತನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ
ಮೈರಾಡ್ – ಆಶ್ರಯ ಹಸ್ತ ಟ್ರಸ್ಟ್ ವತಿಯಿಂದ ಕುಂಟೆಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಹಾರಗದ್ದೆ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಕೋನಸಂದ್ರ ಗ್ರಾಮಸ್ಥರ ಸಮ್ಮುಖದಲ್ಲಿ ಕುಂಟೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಕೋನಸಂದ್ರ ಬೊಮ್ಮಂಡಹಳ್ಳಿ ಮುಖ್ಯರಸ್ತೆಯ ಪಕ್ಕದಲ್ಲಿ ಇರುವ ಗೊಕುಂಟೆಯಲ್ಲಿ ಹಲವು ವರ್ಷಗಳಿಂದ ನೀರು ಇಲ್ಲದೇ ಕಸ ಹಾಕುವ ಜಾಗವಾಗಿ ಕುಂಟೆ ರೂಪಾಂತರಗೊಂಡಿತ್ತು. ಹೀಗಾಗಿ ಗೋ ಕುಂಟೆಯನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಮೈರಾಡ – ಆಶ್ರಯ ಹಸ್ತ ಟ್ರಸ್ಟ್ ನೇತೃತ್ವದಲ್ಲಿ ಇಂದು ಕುಂಟೆಯ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಕುಂಟೆಯನ್ನ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಿ ಬಳಿಕ ಪಂಚಾಯಿತಿಗೆ ಹಸ್ತಾಂತರ ಮಾಡುವ ಕೆಲಸವನ್ನು ಮೈರಾಡ್ ಆಶ್ರಯ ಹಸ್ತ ಟ್ರಸ್ಟ್ ಮಾಡಲಿದೆ ಎಂದು ಸಂಸ್ಥೆಯ ಮುಖ್ಯಸ್ಥರು ಮಾಹಿತಿ ನೀಡಿದರು
ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

