Breaking
20 Sep 2026, Sun

ದಾಸನಪುರ ದಲಿತ ಯುವಕ ಸುರೇಶ್‌ ಕೊಲೆ ಪ್ರಕರಣ ಸಿಓಡಿಗೆ ವಹಿಸುವಂತೆ ಆನೇಕಲ್ ನಲ್ಲಿ ದಲಿತ ಒಕ್ಕೂಟದಿಂದ ಅಹೋ ರಾತ್ರಿ ಧರಣಿ

ಆನೇಕಲ್ ನಲ್ಲಿ ದಲಿತ ಒಕ್ಕೂಟದಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಕಳೆದ ಒಂದು ವರ್ಷದ ಹಿಂದೆ ದಾಸನಪುರ ಗ್ರಾಮದಲ್ಲಿ ಸುರೇಶ್‌ ಎಂಬ ಯುವಕನ ಕೊಲೆಯಾಗಿತ್ತು. ಆದರೆ ಅತ್ತಿಬೆಲೆ ಪೊಲೀಸರು ಈ ಕೊಲೆಯ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸದೇ ಅವರ ಕುಟುಂಬಕ್ಕೆ ಅನ್ಯಾಯ ಮಾಡಿದ್ದಾರೆ ಹೀಗಾಗಿ ಸುರೇಶ್ ಕುಟುಂಬಕ್ಕೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರ ಕೊಲೆ ಪ್ರಕರಣವನ್ನು ಸಿಓಡಿಗೆ ವಹಿಸಬೇಕು ಎಂದು ದಲಿತ ಮುಖಂಡರು ಒತ್ತಾಯ ಮಾಡಿದರು. ಅಲ್ಲದೆ ಸೂಕ್ತ ತನಿಖೆ ನಡೆಸದ ಪೋಲಿಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ

Leave a Reply