Breaking
20 Sep 2026, Sun

ಹಸಿರುವಲಯದಲ್ಲಿ ನಿರ್ಮಿಸಿರುವ ಬಡಾವಣೆಗಳ ತೆರವು ಮಾಡುವಂತೆ ಆನೇಕಲ್ ನಲ್ಲಿ ಪ್ರಜಾ ವಿಮೋಚನ ಚಳುವಳಿ ವತಿಯಿಂದ ಆಗ್ರಹ

ಆನೇಕಲ್‌ ತಾಲೂಕಿನಲ್ಲಿ ಹಸಿರು ವಲಯದಲ್ಲಿ ನಿರ್ಮಾಣವಾಗಿರುವ ಬಡಾವಣೆಗಳನ್ನ ತೆರೆವು ಮಾಡುವಂತೆ ಆಗ್ರಹಿಸಿ ಪ್ರಜಾ ವಿಮೋಚನಾ ಚಳುವಳಿ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. ಸಂಘಟನೆ ರಾಜ್ಯಾಧ್ಯಕ್ಷ ಆನೇಕಲ್‌ ಕೃಷ್ಣಪ್ಪ ಮಾತನಾಡಿ ತಾಲೂಕಿನ ವಿವಿಧ ಭಾಗಗಳಲ್ಲಿ ಸರ್ಕಾರಕ್ಕೆ ವಂಚಿಸಿ ಬಡಾವಣೆಗಳನ್ನ ನಿರ್ಮಾಣ ಮಾಡಿ ಅಮಾಯಕರಿಗೆ ಮಾರಾಟ ಮಾಡಲಾಗಿದೆ. ಈ ರೀತಿಯ ಅಕ್ರಮ ಬಡಾವಣೆಗಳನ್ನು ತಹಶೀಲ್ದಾರ್ ರವರು ಕೂಡಲೇ ತೆರವು ಮಾಡಬೇಕು ಎಂದು ಒತ್ತಾಯಿಸಿದ್ದರು. ಮಾರ್ಚ್ 14ರಂದು ಈ ಸಂಬಂಧ ಜಿಗಣಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಇದೇ ವೇಳೆ ತಿಳಿಸಿದರು

Leave a Reply