Breaking
20 Sep 2026, Sun

ಚಂಬೇನಹಳ್ಳಿ ಯಲ್ಲಿ ಸಾರ್ವಜನಿಕರ ರಸ್ತೆ ಕಬಳಿಕೆಗೆ ಯತ್ನ

ಚಂಬೇನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರು ಓಡಾಡುತ್ತಿದ್ದ ರಸ್ತೆಯನ್ನ ಕಬಳಿಕೆ ಮಾಡಲು ಖಾಸಗಿ ವ್ಯಕ್ತಿಗಳು ಪ್ರಯತ್ನಿಸಿದ್ದಾರೆ. ಇಂದು ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಗುಂಡಿಯನ್ನು ಕೊರೆಯಲಾಗಿದ್ದು ಸಾರ್ವಜನಿಕರ ಹೋರಾಟಕ್ಕೆ ತೊಂದರೆ ಉಂಟಾಗಿದೆ. ಹೀಗಾಗಿ ಗ್ರಾಮಸ್ಥರು ಖಾಸಗಿ ವ್ಯಕ್ತಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಪ್ರತಿದಿನ ಇದೇ ರಸ್ತೆಯಲ್ಲಿ ಸಾರ್ವಜನಿಕರು ಓಡಾಡುತ್ತಿದ್ದರು ಕೆಲವರು ರಸ್ತೆಯನ್ನ ಕಬಳಿಕೆ ಮಾಡಲು ಹುನ್ನಾರ ನಡೆಸಿದ್ದಾರೆ. ಹೀಗಾಗಿ ಖಾಸಗಿ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.

Leave a Reply