Breaking
17 Jul 2026, Fri

ಭಾರತದ ಪ್ಯಾರಾ ಥ್ರೋಬಾಲ್ ತಂಡದ ನಾಯಕಿಯಾಗಿ ಆನೇಕಲ್ ತಾಲೂಕಿನ ರೇಣುಕಾ ಆಯ್ಕೆ, ಗಣ್ಯರಿಂದ ಶುಭಾಶಯ ಕೋರಿಕೆ

ಭಾರತದ ಪ್ಯಾರಾ ಥ್ರೋಬಾಲ್ ತಂಡದ ನೂತನ ನಾಯಕಿಯಾಗಿ ರೇಣುಕಾ ಶ್ರೀನಿವಾಸ್ ರವರನ್ನು ಆಯ್ಕೆ ಮಾಡಲಾಗಿದೆ. ಥ್ರೋ ಬಾಲ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ರೇಣುಕಾರವರ ಪ್ರತಿಭೆಯನ್ನ ಗುರುತಿಸಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ನೇಪಾಳ, ಬ್ಯಾಂಕಾಕ್ ಹಾಗೂ ಮಲೇಶಿಯಾದಲ್ಲಿ ಉತ್ತಮವಾಗಿ ಆಟವಾಡಿ ಭಾರತ ತಂಡಕ್ಕೆ ಕಪ್ ದೊರಕಿಸಿಕೊಟ್ಟ ರೇಣುಕಾರವರ ಪ್ರತಿಭೆ ಗುರುತಿಸಿ ಅವರನ್ನು ಭಾರತ ತಂಡಕ್ಕೆ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಆನೇಕಲ್ ಪಟ್ಟಣದ ನೂರಾರು ಮಂದಿ ರೇಣುಕಾ ಅವರಿಗೆ ಶುಭಾಶಯಗಳು ಕೋರಿದರು

Leave a Reply