ಬೆಂಗಳೂರು ಹೊರವಲಯದ ಹೊಸರೋಡು ಸಮೀಪವಿರುವ ಚನ್ನಕೇಶವ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪಾಂಡುರಂಗ ಎಂಬಾತ ಮೆಕಾನಿಕಲ್ ಜನರೇಟರ್ ಎಂಬ ನೂತನ ಸಾಧನವನ್ನ ಕಂಡು ಹಿಡಿದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಪಡೆದುಕೊಂಡಿದ್ದಾನೆ. ಪಾಂಡಿಚೇರಿಯಲ್ಲೇ ನಡೆದ ರಾಜ್ಯಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಪಾಂಡುರಂಗ ಮೊದಲ ಬಹುಮಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ. ಈತನ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಂತಸ ವ್ಯಕ್ತಪಡಿಸಿದರು. ಮುಂದೆ ಪಾಂಡುರಂಗ ವಿಜ್ಞಾನ ವಿಷಯದಲ್ಲಿ ಮತ್ತಷ್ಟು ಸಾಧನೆ ಮಾಡುವಂತೆ ಶಿಕ್ಷಕರು ಪ್ರಶಂಸೆ ವ್ಯಕ್ತಪಡಿಸಿದರು.

