Breaking
20 Sep 2026, Sun

ಆನೇಕಲ್ ಪುರಸಭೆಯಲ್ಲಿ ಬಜೆಟ್ ಪೂರ್ವ ಬಾವಿ ಸಭೆ

ಆನೇಕಲ್ ನ ಪುರಸಭೆಯಲ್ಲಿ 2025 – 26 ಬಜೆಟ್ ಪೂರ್ವಭಾವಿ ಸಭೆ ಆಯೋಜನೆ ಮಾಡಲಾಯಿತು. ಪುರಸಭಾ ಅಧ್ಯಕ್ಷ ಸುಧಾ ನಿರಂಜನ್ ಹಾಗೂ ಉಪಾಧ್ಯಕ್ಷರಾದ ಭುವನ ದಿನೇಶ್ ರವರ ನೇತೃತ್ವದಲ್ಲಿ ಈ ಒಂದು ಸಭೆ ನಡೆಸಲಾಯಿತು. ಬಜೆಟ್ ನಲ್ಲಿ ಕೆಲವು ಅಂಶಗಳನ್ನು ಸೇರಿಸುವ ಉದ್ದೇಶದಿಂದ ಸಾರ್ವಜನಿಕರ ಬಳಿ ಸಲಹೆ ಸೂಚನೆಗಳನ್ನ ಪಡೆಯಲಾಯಿತು. ಹಲವು ಸಾರ್ವಜನಿಕರು ತಮ್ಮ ಅಮೂಲ್ಯವಾದ ಸಲಹೆಗಳನ್ನ ಪುರಸಭಾ ಅಧ್ಯಕ್ಷರಿಗೆ ನೀಡಿದರು. ಜೊತೆಗೆ ಪುರಸಭೆ ವ್ಯಾಪ್ತಿಯ ಕೆಲವು ಕುಂದು ಕೊರತೆಗಳ ಚರ್ಚೆ ನಡೆಸಲಾಯಿತು. ಪುರಸಭಾ ಸದಸ್ಯರಾದ ಸುರೇಶ್ ಬಾಬು ಹಾಗೂ ಪುರಸಭೆಯ ಮುಖ್ಯಾಧಿಕಾರಿ ಅಮರನಾಥ್ ಸಭೆಯಲ್ಲಿ ಭಾಗವಹಿಸಿದ್ದರು.

Leave a Reply