Breaking
20 Sep 2026, Sun

ನಸುಕಿನ ಜಾವದಲ್ಲಿ ಬೆಂಕಿ ಹೊತ್ತಿಕೊಂಡು ಉರಿದ ಕಾರು

ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಸುಕಿನ ಜಾವ ಕಾರೊಂದು ಹೊತ್ತಿ ಉರಿದಿದೆ . ಮೋಹನ್ ,ವಿಜ್ಞೇಶ್ ಎಂಬುವವರಿಗೆ ಸೇರಿದ ಮಾರುತಿ ಕಾರಿಗೆ ಮುಂಜಾನೆ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಬೆಂಕಿ ಇಡಿ ಕಾರಿಗೆ ವ್ಯಾಪಿಸಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಥಳೀಯರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಸೂರ್ಯ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ಒಂದು ಪ್ರಕರಣ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply