Breaking
20 Sep 2026, Sun

ಒಂಟಿ ಸಲಗದ ದಾಳಿಗೆ ಕರು ಬಲಿ, ತಮಿಳುನಾಡು ಗಡಿ ಭಾಗದ ಜವಳಗಿರಿ ಬಳಿ ಘಟನೆ

ಅರಣ್ಯದಿಂದ ಗ್ರಾಮಕ್ಕೆ ಬಂದ ಕಾಡನೆಯೊಂದು ಕರುವಿನ ಮೇಲೆ ದಾಳಿ ಮಾಡಿದ ಪರಿಣಾಮ ಕರು ಸ್ಥಳದಲ್ಲೇ ಸಾವನ್ನಪ್ಪಿದೆ. ಕರ್ನಾಟಕ ತಮಿಳುನಾಡು ಗಡಿ ಭಾಗದ ಜವಳಗಿರಿಯಲ್ಲಿ ಭಾನುವಾರ ಘಟನೆ ನಡೆದಿದೆ. ಅರಣ್ಯದಿಂದ ಗ್ರಾಮಕ್ಕೆ ಲಗ್ಗೆ ಇಟ್ಟ ಒಂಟಿ ಸಲಗ ಕರುವಿನ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಕರು ಸಾವನ್ನಪ್ಪಿದೆ. ಹೀಗಾಗಿ ಅರಣ್ಯ ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಕರು ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ

Leave a Reply