Breaking
21 Jul 2026, Tue

ನಿತ್ಯ ತಡವಾಗಿ ಬರುತ್ತಿದ್ದ ಗ್ರಾಮ ಸಹಾಯಕನನ್ನು ಪ್ರಶ್ನಿಸಿದಕ್ಕೆ ಪತ್ರಕರ್ತನ ಮೇಲೆ ಹಲ್ಲೆ ಆರೋಪ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪ್ರತಿದಿನ ಕಚೇರಿಗೆ ತಡವಾಗಿ ಬರುತ್ತಿದ್ದ ಗ್ರಾಮ ಸಹಾಯಕನನ್ನ ಪ್ರಶ್ನೆ ಮಾಡಿದ್ದಕ್ಕೆ ಪತ್ರಕರ್ತನ ಮೇಲೆ ಹಲ್ಲೆ ಮಾಡಲಾಗಿದೆ. ನೆರಿಗ ಗ್ರಾಮದ ಗ್ರಾಮ ಆಡಳಿತ ಅಧಿಕಾರಿ ಆತನ ಸಹಚರ ಪತ್ರಕರ್ತ ಮುನಿಯಪ್ಪನ ಮೇಲೆ ಹಲ್ಲೆ ಮಾಡಿದ್ದು, ಅವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪ್ರತಿದಿನ ಕಚೇರಿಗೆ ತಡವಾಗಿ ಬರುತ್ತಿದ್ದನ್ನು ಪ್ರಶ್ನೆ ಮಾಡಿರುವುದಕ್ಕೆ ಮುನಿಯಪ್ಪನ ಮೇಲೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ, ಅವರಿಗೆ ಹಲ್ಲೆ ಮಾಡಿರುವ ದೃಶ್ಯಾವಳಿಗಳು ಮೊಬೈಲ್ ನಲ್ಲಿ ಸೆರೆಯಾಗಿದೆ. ರವಿ ಹಾಗೂ ಅವನ ಸಹಚರ ವಿರುದ್ಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply