Breaking
21 Sep 2026, Mon

ಕಟ್ಟಡದ 2ನೇ ಮಹಡಿಯಿಂದ ತಳ್ಳಿ ಪತ್ನಿಯನ್ನ ಕೊಲೆ ಮಾಡಿದ ಪತಿ, ಸರ್ಜಾಪುರ ಪೊಲೀಸರಿಂದ ಆರೋಪಿ ಬಂಧನ

ಕಟ್ಟಡದ 2ನೇ ಮಹಡಿಯಿಂದ ತಳ್ಳಿ ಪತ್ನಿಯನ್ನ ಪತಿಯೇ ಕೊಲೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ತಿಗಳಚೌಡದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. 40 ವರ್ಷದ ಮಂಜುಳಾ ಕೊಲೆಯಾದ ದುರ್ದೈವಿ. ಮಂಜುಳಾ ಪತಿ ಮಂಜುನಾಥ್ ಈಕೆಯನ್ನ ಎರಡನೇ ಮಹಡಿಗೆ ಕರೆದುಕೊಂಡು ಹೋಗಿ ಆಕೆಯನ್ನ ಕಟ್ಟಡದಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾನೆ. ಮಂಜುಳಾ ಮಾನಸಿಕ ಅಸ್ವಸ್ಥೆಯಾಗಿದ್ದು ಇಬ್ಬರ ನಡುವೆ ಜಗಳ ನಡೆದು ಅವಘಡ ಸಂಭವಿಸಿದೆ. ಆರೋಪಿ ಮಂಜುನಾಥ ನನ್ನ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply