Breaking
10 Feb 2026, Tue

ದೊಡ್ಡ ನಾಗಮಂಗಲದಲ್ಲಿ ಮದ್ದೂರಮ್ಮ ಜಾತ್ರೆಗೆ 80 ಅಡಿಯೊಳಗೆ ರಥ ನಿರ್ಮಿಸುವಂತೆ ಪೊಲೀಸರ ಮನವಿ, ಗ್ರಾಮಸ್ಥರ ಆಕ್ರೋಶ

ದೊಡ್ಡ ನಾಗಮಂಗಲ ಗ್ರಾಮದಲ್ಲಿ ಐತಿಹಾಸಿಕ ಮದ್ದೂರಮ್ಮ ಜಾತ್ರೆಗೆ 80 ಅಡಿ ಒಳಗೆ ರಥವನ್ನ ನಿರ್ಮಾಣ ಮಾಡುವಂತೆ ಪೊಲೀಸರು ಇಂದು ಮನವಿ ಮಾಡಿದರು. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟ‌ರ್ ಸತೀಶ್ ರವರು ಗ್ರಾಮಕ್ಕೆ ಆಗಮಿಸಿ ಈ ಬಾರಿ ರಥದ ಎತ್ತರ ಕಡಿತ ಮಾಡುವಂತೆ ಗ್ರಾಮಸ್ಥರಿಗೆ ಮನವೊಲಿಸುವ ಕೆಲಸ ಮಾಡಿದರು ಪ್ರತಿ ವರ್ಷ ಐತಿಹಾಸಿಕ ಮದ್ದೂರಮ್ಮ ಜಾತ್ರೆಗೆ ಹುಸ್ಕೂರು ಸುತ್ತಮುತ್ತಲ 7 ಗ್ರಾಮಗಳಿಂದ 100 ಅಡಿ ಎತ್ತರದ ರಥಗಳನ್ನು ಎಳೆದು ತರುವ ಸಂಪ್ರದಾಯ ನೂರಾರು ವರ್ಷಗಳಿಂದ ರೂಢಿಯಲ್ಲಿದೆ. ಈ ಬಾರಿ ರಥದ ಎತ್ತರ ಕಡಿತಗೊಳಿಸುವಂತೆ ಪೊಲೀಸರು ಮನವಿ ಮಾಡಿದರೂ ಗ್ರಾಮಸ್ಥರು ಕಿವಿಗೊಡಲಿಲ್ಲ.

ಹೀಗಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು

Leave a Reply