Breaking
21 Sep 2026, Mon

ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್‌ಗಳ ಪೆರೆಡ್, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಇನ್ಸ್‌ಪೆಕ್ಟ‌ರ್ ರಾಘವೇಂದ್ರ ಎಚ್ಚರಿಕೆ

ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟ‌ರ್ ರಾಘವೇಂದ್ರ ನೇತೃತ್ವದಲ್ಲಿ ರೌಡಿಶೀಟರ್ ಪೆರೇಡ್ ಆಯೋಜನೆ ಮಾಡಲಾಗಿತ್ತು. ಅತ್ತಿಬೆಲೆ ಠಾಣಾ ವ್ಯಾಪ್ತಿಯ 30ಕ್ಕೂ ಹೆಚ್ಚು ರೌಡಿಶೀಟರ್ ಗಳು ಪೆರೆಡ್ ನಲ್ಲಿ ಭಾಗವಹಿಸಿದ್ದರು. ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ರೌಡಿಶೀಟರ್ ಗಳಿಗೆ ಖಡಕ್ ವಾರ್ನಿಂಗ್ ನೀಡಲಾಯಿತು. ಜೊತೆಗೆ ಪೊಲೀಸ್ ಠಾಣೆಯ ಆವರಣವನ್ನು ಪುಡಿ ರೌಡಿಗಳ ಕೈಯಲ್ಲಿ ಸ್ವಚ್ಚಗೊಳಿಸುವ ಮೂಲಕ ಸಮಾಜದಲ್ಲಿ ಶಾಂತಿ ಕದಡದಂತೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

Leave a Reply