Breaking
21 Sep 2026, Mon

ಸ್ವಾತಿ ನಗರ ಬಡಾವಣೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸೋಮಶೇಖರ್ ಚಾಲನೆ

ಯಶವಂತಪುರ ವಿಧಾನಸಭಾ ಕ್ಷೇತ್ರದ ಬಂಡೆಮಠ ವಾರ್ಡ್ ನಲ್ಲಿರುವ ಬಡಾವಣೆಯಲ್ಲಿ ನೂತನವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕ ಸೋಮಶೇಖರ್ ಹಾಗೂ ನಿವಾಸಿಗಳ ಸಮ್ಮುಖದಲ್ಲಿ ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಸ್ವಾತಿನಗರ ಬಡಾವಣೆ ಹಾಗೂ ವಿದ್ಯಾಪೀಠ ರಸ್ತೆಯಲ್ಲಿ ಹಲವು ತಿಂಗಳಿನಿಂದ ರಸ್ತೆಗಳು ಗುಂಡಿಮಯವಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. ಹೀಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ

Leave a Reply