Breaking
21 Sep 2026, Mon

ನೆರಳೂರು ಗ್ರಾಮದ ರಾಘವ ನಗರದ ಮನೆಯಲ್ಲಿ ಸಿಲಿಂಡ‌ರ್ ಸ್ಫೋಟ, ಓರ್ವನಿಗೆ ಗಂಭೀರ ಗಾಯ

ಆನೇಕಲ್ ತಾಲೂಕಿನ ನೆರಳೂರು ಗ್ರಾಮದ ರಾಘವ ನಗರದಲ್ಲಿ ಮನೆಯಲ್ಲಿ ಎಲ್‌ಪಿಜಿ ಸಿಲಿಂಡ‌ರ್ ಸ್ಫೋಟಗೊಂಡು ಓರ್ವ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಬಿಹಾರ ಮೂಲದ ದಿನೇಶ್ ದಾಸ್ ತೀವ್ರ ಗಾಯಗೊಂಡ ವ್ಯಕ್ತಿ. ಕೆಲಸ ಮುಗಿಸಿ ಮನೆಗೆ ಬಂದ ಸಮಯದಲ್ಲಿ ಗ್ಯಾಸ್ ಲೀಕ್ ಆಗಿದೆ. ಇದನ್ನ ಗಮನಿಸದೇ ಲೈಟ್ ಸ್ವಿಚ್ ಆನ್ ಮಾಡಿದ ವೇಳೆ ಸಿಲಿಂಡರ್ ಸ್ಫೋಟಗೊಂಡು ಮನೆಯ ಮೇಲ್ಟಾವಣಿ ಹಾಗೂ ಹಲವು ವಸ್ತುಗಳು ಹಾನಿ ಉಂಟಾಗಿದೆ. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು

Leave a Reply