Breaking
20 Sep 2026, Sun

ಪಟ್ಟಣದಲ್ಲಿ ದೇಸಿ ಹಳ್ಳಿಕಾರ್ ತಳಿಯ ಎತ್ತುಗಳ ಬೃಹತ್ ಮೆರವಣಿಗೆ, ಕರುನಾಡ ರೈತ ಗೋಪಾಲಕರ ಸಂಘದಿಂದ ಕಾರ್ಯಕ್ರಮ

ಆನೇಕಲ್ ಪಟ್ಟಣದಲ್ಲಿ ದೇಸಿ ಹಳ್ಳಿಕಾರ್ ತಳಿಯ ಎತ್ತುಗಳ ಬೃಹತ್‌ ಮೆರವಣಿಗೆಯನ್ನ ಆಯೋಜನೆ ಮಾಡಲಾಗಿತ್ತು. ಕರುನಾಡ ರೈತ ಗೋಪಾಲಕರ ಸಂಘದ ವತಿಯಿಂದ ಆಯೋಜನೆ ಮಾಡಿದ್ದ ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಭಾಗಗಳ ರೈತರು ಭಾಗವಹಿಸಿದ್ದರು. 50 ಜೊತೆ ಸಿಂಗರಿಸಿದ ಹಳ್ಳಿಕಾರ್ ಎತ್ತುಗಳನ್ನು ಆನೇಕಲ್ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ದೇಸಿ ತಳಿ ಹಳಿಕಾ‌ರ್ ಎತ್ತುಗಳನ್ನು ಸಂರಕ್ಷಣೆ ಮಾಡುವಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಲಾಯಿತು.

Leave a Reply