Breaking
20 Sep 2026, Sun

ಆಕಾಶವಾಣಿ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯ

ಕ್ಷುಲಕ ಕಾರಣಕ್ಕೆ ಕಾರ್ಮಿಕರ ನಡುವೆ ಜಗಳ ನಡೆದು ಕೊಲೆಯಲ್ಲಿ

ಕುಲಕ ಕಾರಣಕ್ಕೆ ಇಬ್ಬರು ಕಾರ್ಮಿಕರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಕಾಶವಾಣಿ ಬಡಾವಣೆಯಲ್ಲಿ ಇಂದು ಘಟನೆ ನಡೆದಿದೆ, ಸೈಯದ್ ಮುಬಾರಕ್ ಕೊಲೆಯಾದ ದುರ್ದೈವಿ. ಜಲ್ಲಿ ಹಾಗೂ ಮರಳು ಲೋಡ್ ಮಾಡಿಕೊಂಡಿದ್ದ ಮುಬಾರಕ್ ತನ್ನ ಸಹಪಾಠಿ ಜೊತೆ ಜಗಳ ತೆಗೆದು ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಈತನ ಸಹಪಾಠಿ ಚಾಕುವಿನಿಂದ ಇರಿದು ಇತನನ್ನ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಸಂಪಿಗೆಹಳ್ಳಿ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply