Breaking
20 Sep 2026, Sun

ಕಟ್ಟಿಗೇನಹಳ್ಳಿ ಅಂಬಾಭವಾನಿ ಲೇಔಟ್‌ನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸಚಿವ ಕೃಷ್ಣಭೈರೇಗೌಡ, ಚಾಲನೆ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕಟ್ಟಿಗೇನಹಳ್ಳಿ ಸಮೀಪವಿರುವ ಅಂಬಾಭವಾನಿ ಬಡಾವಣೆಯಲ್ಲಿ ನೂತನ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶಾಸಕ ಕೃಷ್ಣ ಬೈರೇಗೌಡ ಹಾಗೂ ಸ್ಥಳೀಯ ನಿವಾಸಿಗಳು ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಅಂಬಾಭವಾನಿ ಬಡಾವಣೆ ಹಾಗೂ ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ ರಸ್ತೆಗಳು ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ವಾಹನಗಳ ಓಡಾಟಕ್ಕೆ ತೊಂದರೆ ಉಂಟಾಗುತ್ತಿತ್ತು.

ಹೀಗಾಗಿ ನಿವಾಸಿಗಳ ಅನುಕೂಲಕ್ಕಾಗಿ ನೂತನವಾಗಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಂದು ಚಾಲನೆ ನೀಡಲಾಗಿದೆ

Leave a Reply