Breaking
20 Sep 2026, Sun

ಅನೇಕಲ್ ಪೊಲೀಸ್ ಠಾಣೆಯಲ್ಲಿ ಡಿವೈಎಸ್‌ಪಿ ಮೋಹನ್ ನೇತೃತ್ವದಲ್ಲಿ ರೌಡಿಶೀಟರ್ ಪೆರೆಡ್, ಸಮಾಜದಲ್ಲಿ ಶಾಂತಿ ಕದಡದಂತೆ ಎಚ್ಚರಿಕೆ

ಆನೇಕಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಮೋಹನ್ ರವರ ನೇತೃತ್ವದಲ್ಲಿ ರೌಡಿಶೀಟರ್ ಪೆರೇಡ್ ಆಯೋಜನೆ ಮಾಡಲಾಗಿತ್ತು. ಆನೇಕಲ್ ಪೊಲೀಸ್ ಠಾಣೆಯ 40ಕ್ಕೂ ಹೆಚ್ಚು ರೌಡಿಶೀಟರ್‌ಗಳು ಪೆರೇಡ್ ನಲ್ಲಿ ಭಾಗವಹಿಸಿದ್ದರು. ಆನೇಕಲ್ ಉಪ ವಿಭಾಗದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಆನೇಕಲ್ ಉಪವಿಭಾಗದ ಡಿವೈಎಸ್‌ಪಿ ಮೋಹನ್ ನೇತೃತ್ವದಲ್ಲಿ ಪೆರೆಡ್ ನಡೆಸಿ ಎಲ್ಲಾ ರೌಡಿಶೀಟರ್ ಗಳಿಗೆ ವಾರ್ನಿಂಗ್ ನೀಡಲಾಯಿತು. ಸಮಾಜದಲ್ಲಿ ಶಾಂತಿ ಕದಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ

Leave a Reply