Breaking
21 Jul 2026, Tue

ರಾಯಸಂದ್ರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಶಾಂತಿಪುರ ಪಂಚಾಯಿತಿ ಅಧ್ಯಕ್ಷ ಮದನ್ ಉದ್ಘಾಟನೆ

ರಾಯಸಂದ್ರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಇಂದು ಆಯೋಜನೆ ಮಾಡಲಾಗಿತ್ತು. ಶಾಂತಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮದನ್ ಆರೋಗ್ಯ ತಪಾಸಣಾ ಶಿಬಿರವನ್ನ ಉದ್ಘಾಟಿಸಿದರು. ರಾಯಸಂದ್ರ ಸುತ್ತಮುತ್ತಲ ನೂರಾರು ಸಾರ್ವಜನಿಕರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಪಿಇಎಸ್ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಗ್ರಾಮೀಣ ಭಾಗದಲ್ಲಿ ಈ ರೀತಿ ಆರೋಗ್ಯ ತಪಾಸಣಾ ಶಿಬಿರಗಳು ಹೆಚ್ಚು ಹೆಚ್ಚು ನಡೆಯುವಂತಾಗಬೇಕು ಎಂದು ಮದನ್ ಅಭಿಪ್ರಾಯಪಟ್ಟರು.

Leave a Reply