Breaking
20 Sep 2026, Sun

ಸುಬ್ರಮಣ್ಯಪುರದ ಜೆಹೆಚ್‌ಸಿ ಬಡಾವಣೆಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಕೃಷ್ಣಪ್ಪ ಚಾಲನೆ.

ಬೆಂ.ದಕ್ಷಿಣ ವ್ಯಾಪ್ತಿಯ ಸುಬ್ರಹ್ಮಣ್ಯಪುರದ ಜೆಹೆಚ್‌ಸಿ ಬಡಾವಣೆಯಲ್ಲಿ ನೂತನವಾಗಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇಂದು ಶಾಸಕ ಕೃಷ್ಣಪ್ಪ ಹಾಗೂ ಬಡಾವಣೆಯ ನಿವಾಸಿಗಳಿಂದ ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ಜೆಹೆಚ್‌ಸಿ ರಸ್ತೆಗಳು ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅನಾನುಕೂಲ ಉಂಟಾಗುತ್ತಿತ್ತು. ಹೀಗಾಗಿ ಸಾರ್ವಜನಿಕರ ಒತ್ತಾಯದ ಮೇರೆಗೆ ನೂತನವಾಗಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.

Leave a Reply