ಫೆ10 ರಿಂದ 14 ರವರೆಗೂ ಬೆಂಗಳೂರಿನಲ್ಲಿ ಏರ್ ಶೋ ಆಯೋಜನೆ ಮಾಡಿದ್ದು ಸಕಲ ಸಿದ್ಧತೆಗಳು ಆರಂಭಗೊಂಡಿದೆ. ಹೀಗಾಗಿ ಏರ್ಪೋಟ್ ಸುತ್ತ ಮುತ್ತ ಕೆಲವು ರಸ್ತೆಗಳ ಸಂಚಾರ ಮಾರ್ಪಾಡು ಮಾಡಲಾಗಿದೆ. ಮೇಕ್ರಿ ಸರ್ಕಲ್, ಗೊರಗುಂಟೆಪಾಳ್ಯ ಹಾಗೂ ನಾಗವಾರ ರಸ್ತೆಯಲ್ಲಿ ಬಾರಿವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಜೊತೆಗೆ ಜಿಕೆವಿಕೆ ಕ್ಯಾಂಪಸ್ ನಲ್ಲಿ ಬರುವ ಸಾರ್ವಜನಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ