Breaking
20 Sep 2026, Sun

ಅಡಿಸೊನ್ನಟಿಯ ಸಿಪಾನಿ ವೃದ್ದಾಶ್ರಮದಲ್ಲಿ ಶಾಸಕ ಶಿವಣ್ಣ ಹುಟ್ಟುಹಬ್ಬ ಆಚರಣೆ- ಗೌರೀಶ್ ನೇತೃತ್ವ

ಆನೇಕಲ್ ಶಾಸಕ ಶಿವಣ್ಣರವರ ಹುಟ್ಟು ಹಬ್ಬದ ಅಂಗವಾಗಿ ಆಡಿಸೊನ್ನಟ್ಟಿ ಗ್ರಾಮದ ಸಿಪಾಯಿ ವೃದ್ಧಾಶ್ರಮದಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸಿಂಗೇನ ಅಗ್ರಹಾರ ಗೌರೀಶ್ ನೇತೃತ್ವದಲ್ಲಿ 400 ವಯೋವೃದ್ಧರಿಗೆ ಉಚಿತವಾಗಿ ಬೆಡ್ ಶಿಟ್ ಹಾಗೂ ಅಗತ್ಯ ವಸ್ತುಗಳನ್ನ ವಿತರಣೆ ಮಾಡಲಾಯಿತು. ಜೊತೆಗೆ ಶಾಸಕ ಶಿವಣ್ಣರವರ ಸಮ್ಮುಖದಲ್ಲಿ ಆಶ್ರಮದಲ್ಲಿದ್ದ ಎಲ್ಲರಿಗೂ ಅನ್ನದಾಸೋಹ ಕಾರ್ಯಕ್ರಮ ನಡೆಸಲಾಯಿತು. ಆಶ್ರಮದಲ್ಲಿ ಕೆಕ್ ಕತ್ತರಿಸುವ ಮೂಲಕ ಶಾಸಕ ಶಿವಣ್ಣರವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಕೋರಲಾಯಿತು. ಇದೆ ವೇಳೆ ಮಾತನಾಡಿದ ಗೌರಿಶ್ ಅನೇಕ ಶಾಸಕರಾಗಿ ಸತತ ಮೂರು ಬಾರಿ ಆಯ್ಕೆಯಾಗಿರುವ ಶಿವಣ್ಣರವರು ಮುಂದೆ ಮಂತ್ರಿಯಾಗಿ ಆನೇಕಲ್ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಿ ಹಾಗೂ ರಾಜಕೀಯವಾಗಿ ಮತ್ತಷ್ಟು ಉತ್ತುಂಗಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು

Leave a Reply