Breaking
20 Sep 2026, Sun

ಕೊಡಿಗೆಹಳ್ಳಿಯಲ್ಲಿ ಕಸ ಸಂಗ್ರಹಣಾ ವಾಹನಗಳಿಗೆ ಚಾಲನೆ ನೀಡಿದ ಶಾಸಕ ಸೋಮಶೇಖರ್

ಯಶವಂತಪುರ ವಿಧಾನಸಭಾ ಕ್ಷೇತ್ರದ ಕೊಡಿಗೆಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಕಸ ಸಂಗ್ರಹಣ ವಾಹನಗಳಿಗೆ ಚಾಲನೆ ನೀಡಲಾಗಿದೆ. ಶಾಸಕ ಸೋಮಶೇಖರ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಗ್ರಾಮಸ್ಥರಿಗೆ ಕಸದ ಬುಟ್ಟಿಗಳನ್ನ ವಿತರಿಸಿ ಕಸದ ವಾಹನಗಳಿಗೆ ಚಾಲನೆ ನೀಡಲಾಗಿದೆ. ಗ್ರಾಮಸ್ಥರು ಪ್ರತಿದಿನ ಹಸಿ ಕಸ ಹಾಗೂ ಒಣ ಕಸವನ್ನು ಬೇರ್ಪಡಿಸಿ ಪಂಚಾಯಿತಿ ಸಿಬ್ಬಂದಿಗಳಿಗೆ ನೀಡುವುದರಿಂದ ಕಸವನ್ನ ಸುಲಭವಾಗಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರು ಕಸವನ್ನು ವಿಂಗಡಿಸಿ ಬಳಿಕ ವಿಲೇವಾರಿ ಮಾಡುವಂತೆ ಶಾಸಕ ಸೋಮಶೇಖರ್ ಜನರಲ್ಲಿ ಮನವಿ ಮಾಡಿದರು

Leave a Reply