Breaking
20 Sep 2026, Sun

ಹೆಬ್ಬಗೋಡಿಯಲ್ಲಿ ಇನ್ಸ್‌ಪೆಕ್ಟರ್ ಸೋಮಶೇಖರ್ ನೇತೃತ್ವದಲ್ಲಿ ರೌಡಿಶೀಟರ್ ಪೆರೆಡ್

ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸರಿಂದ ರೌಡಿಶೀಟರ್ ಪೆರೇಡ್ ಆಯೋಜನೆ ಮಾಡಲಾಗಿತ್ತು. ಹೆಬ್ಬಗೋಡಿ ಪೊಲೀಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಇನ್ಸ್‌ಪೆಕ್ಟರ್ ಸೋಮಶೇಖರ್ ರವರ ನೇತೃತ್ವದಲ್ಲಿ ರೌಡಿ ಅಸಾಮಿಗಳನ್ನು ಕರೆಸಿ ವಾರ್ನಿಂಗ್ ನೀಡಲಾಯಿತು. ಸಮಾಜದಲ್ಲಿ ಶಾಂತಿ ಕದಡುವ ವ್ಯಕ್ತಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿ ಕ್ರಮ ಕೈಗೊಂಡು ಕಠಿಣ ಕ್ರಮ ಜರುಗಿಸುವುದಾಗಿ ರೌಡಿಗಳಿಗೆ ಎಚ್ಚರಿಕೆ ನೀಡಲಾಯಿತು. ಹೆಬ್ಬಗೋಡಿ ಪೊಲೀಸ್ ಠಾಣೆಯ 30ಕ್ಕೂ ಹೆಚ್ಚು ರೌಡಿ ಶೀಟರ್ ಗಳು ಪೆರೆ‌ಡ್ ನಲ್ಲಿ ಭಾಗವಹಿಸಿದ್ದರು

Leave a Reply