Breaking
25 May 2026, Mon

ಕುರುಬರಪಾಳ್ಯದಲ್ಲಿ ಹಾಲಿನ ಗುಣಮಟ್ಟ ಸುಧಾರಣೆಗೆ ತಜ್ಞರಿಂದ ತರಬೇತಿ ಕಾರ್ಯಾಗಾರ, ಶಾಸಕ ಸೋಮಶೇಖರ್ ರವರಿಂದ ಚಾಲನೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಕುರುಬರ ಪಾಳ್ಯ ಗ್ರಾಮದಲ್ಲಿ ಹಾಲಿನ ಗುಣಮಟ್ಟ ಸುಧಾರಣೆಗೆ ತಜ್ಞರಿಂದ ತರಬೇತಿ ಕಾರ್ಯಗಾರ ಆಯೋಜಿಸಲಾಗಿತ್ತು. ಶಾಸಕ ಸೋಮಶೇಖರ್ ಹಾಗೂ ಗಣ್ಯರು ಕಾರ್ಯಗಾರಕ್ಕೆ ಚಾಲನೆ ನೀಡಿದರು. ಕುರುಬರ ಪಾಳ್ಯ ಸುತ್ತಮುತ್ತಲ ಹಾಲು ಉತ್ಪಾದಕರಿಗೆ ಹಾಲಿನ ಗುಣಮಟ್ಟ ಸುಧಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು. ಜೊತೆಗೆ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವತಿಯಿಂದ ಹಾಲು ಉತ್ಪಾದಕರಿಗೆ ಸಹಾಯಧನ ವಿತರಣೆ ಮಾಡಲಾಯಿತು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಹಾಗೂ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ಸಹಭಾಗಿತ್ವದಲ್ಲಿ ಕಾರ್ಯಾಗಾರ ಆಯೋಜಿಸಲಾಗಿತ್ತು

Leave a Reply