ಅತ್ತಿಬೆಲೆಯಲ್ಲಿ ಕ್ರಷರ್ ಮಾಲೀಕರ ಸಂಘದ ವತಿಯಿಂದ ಸಭೆ ಆಯೋಜನೆ ಮಾಡಲಾಗಿದೆ. ಕರ್ನಾಟಕ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹಾಗೂ ಲಾರಿ ಮಾಲೀಕರು ಸಭೆಯಲ್ಲಿ ಭಾಗವಹಿಸಿದ್ದರು. ಇತ್ತಿಚೆಗೆ ಕಟ್ಟಡ ಸಾಮಗ್ರಿಗಳು ಬೆಲೆ ಏರಿಕೆಯಾಗಿದ್ದು ಇದರಿಂದ ಲಾರಿ ಮಾಲೀಕರಿಗೆ ಆರ್ಥಿಕ ಸಂಕಷ್ಟ ಉಂಟಾಗಿದೆ. ಹೀಗಾಗಿ ಕಟ್ಟಡ ಸಾಮಗ್ರಿಗಳ ಬೆಲೆ ಇಳಿಕೆ ಮಾಡಬೆಕು ಹಾಗೂ ಆರ್‌ಟಿಓ ಸೇರಿದಂತೆ ಅಧಿಕಾರಿಗಳ ಉಂಟಾಗುತ್ತಿರುವ ತೊಂದರೆ ಕಡಿಮೆಯಾಗುವ ನಿಟ್ಟಿನಲ್ಲಿ ಮಾತುಕತೆ ನಡೆಸಬೇಕು ಎಂದು ಮಾಲಿಕರು ಚರ್ಚೆ ನಡೆಸಿದರು.
ಅತ್ತಿಬೆಲೆಯಲ್ಲಿ ಕ್ರಷರ್ ಲಾರಿ ಮಾಲೀಕರ ಸಂಘದಿಂದ ವಿಶೇಷ ಸಭೆ, ಕಟ್ಟಡ ಸಾಮಗ್ರಿಗಳ ಬೆಲೆ ಕಡಿಮೆ ಮಾಡಲು ಒತ್ತಾಯ

