ಬೆಂಗಳೂರಿನ ಮಾರತಹಳ್ಳಿ ಸಮೀಪದ ಕೆಎಲ್‌ಎಂ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ತಪ್ಪಿಸಲು ಬಿಎಂಟಿಸಿ ಬಸ್ ಅನ್ನು ಫುಟ್ಬಾತ್ ಮೇಲೆ ಹತ್ತಿಸಲಾಗಿದೆ. ಸರ್ವಿಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಇದ್ದ ಹಿನ್ನೆಲೆಯಲ್ಲಿ ಬಸ್ ಚಾಲಕ ಪುಟ್ ಪಾತ್ ಮೇಲೆ ಬಸ್ ಹತ್ತಿಸಿ ಬಳಿಕ ಮುಖ್ಯ ರಸ್ತೆಗೆ ತೆರಳಿದ್ದಾನೆ. ಸಾರ್ವಜನಿಕರು ಓಡಾಡುವ ಫುಟ್ಬಾತ್ ಮೇಲೆ ಬಸ್ ಹತ್ತಿಸಿರುವ ಕ್ರಮವನ್ನು ಸಾರ್ವಜನಿಕರು ಖಂಡಿಸಿದ್ದಾರೆ.
ಅಲ್ಲದೆ ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ