Breaking
20 Sep 2026, Sun

ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಜಿಗಿದಿದ್ದ ಕೂಡಲೇ ಮಹಿಳಾ ಮೆಟ್ರೋ ಸಿಬ್ಬಂದಿಯಿಂದ ರಕ್ಷಣೆ 

ನಮ್ಮ ಮೆಟ್ರೋ ಜಾಲಹಳ್ಳಿ ನಿಲ್ದಾಣದಲ್ಲಿ ಇಂದು ಬೆಳಗ್ಗೆ ದೊಡ್ಡ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ. 49 ವರ್ಷದ ವ್ಯಕ್ತಿಯೊಬ್ಬ ಮೆಟ್ರೋ ಹಳಿಗೆ ಜಿಗಿದಿದ್ದ. ಕೂಡಲೇ ಮಹಿಳಾ ಮೆಟ್ರೋ ಸಿಬ್ಬಂದಿ ರಕ್ಷಣೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಇಂದು ಬೆಳಗ್ಗೆ 10.23ಕ್ಕೆ ಸರಿಯಾಗಿ ಅನಿಲ್ ಕುಮಾರ್ ಹಳಿಗೆ ಜಿಗಿದು ಪ್ರಾಣ ಕಳೆದುಕೊಳ್ಳಲು ಯತ್ನಿಸಿದ್ದಾರೆ. ಅನಿಲ್ ಕುಮಾರ್ ಮೆಟ್ರೋ ಹಳಿಗೆ ಇಳಿಯುತ್ತಿದ್ದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ಸುಮಿತ್ರಾ ಅವರು ತಕ್ಷಣವೇ ಪವರ್ ಆಫ್ ಮಾಡಿದ್ದಾರೆ. ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ಆಫ್ ಮಾಡಿ ರೈಲು ನಿಲ್ಲಿಸಿದ ಸೆಕ್ಯೂರಿಟಿ ಸುಮಿತ್ರಾ ಅವರ ಈ ಕ್ರಮದಿಂದ ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.

Leave a Reply