Breaking
20 Sep 2026, Sun

ಅತ್ತಿಬೆಲೆಯಲ್ಲಿ ಪೊಲೀಸರಿಂದ ಬ್ಯಾಂಕ್ ಫ್ರಾಡ್ ಹಾಗೂ ಸೈಬ‌ರ್ ಸೆಕ್ಯೂರಿಟಿ ಕುರಿತು ಸಭೆ, ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಭಾಗಿ

ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪೊಲೀಸರಿಂದ ಬ್ಯಾಂಕ್ ಫ್ರಾಡ್ ಹಾಗೂ ಸೈಬ‌ರ್ ಸೆಕ್ಯೂರಿಟಿ ಕುರಿತು ವಿಶೇಷ ಸಭೆ ಕರೆಯಲಾಗಿತ್ತು. ಇನ್ಸೆಕ್ಟರ್ ರಾಘವೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬ್ಯಾಂಕ್ ಮ್ಯಾನೇಜರ್‌ಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಇತ್ತೀಚೆಗೆ ಸೈಬರ್ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರಿಗೆ ತುಂಬಾ ನಷ್ಟ ಉಂಟಾಗುತ್ತಿದೆ. ಹೀಗಾಗಿ ಸೈಬ‌ರ್ ಕಳ್ಳತನ ಕಡೆಗೆ ಬ್ಯಾಂಕ್ ಸಿಬ್ಬಂದಿಗಳು ತ್ವರಿತ ಗತಿಯಲ್ಲಿ ಕಾರ್ಯಾಚರಣೆ ನಡೆಸಿ ಪ್ರಕರಣಗಳ ಪತ್ತೆಗೆ ಪೊಲೀಸರ ಜೊತೆ ಕೈಜೋಡಿಸಬೇಕೆಂದು ಇನ್ಸ್‌ಪೆಕ್ಟರ್ ರಾಘವೇಂದ್ರ ಮನವಿ ಮಾಡಿದರು

Leave a Reply