Breaking
21 Jul 2026, Tue

ಬೆಂಗಳೂರು ಬ್ಯಾಡರಹಳ್ಳಿ ಪೊಲೀಸರಿಂದ ಹನಿಟ್ರ್ಯಾಪ್ ಗ್ಯಾಂಗ್ ಬಂಧನ, ಯುವತಿ ಸೇರಿ ನಾಲ್ವರ ಬಂಧನ

ಸಿವಿಲ್ ಕಂಟ್ರಾಕ್ಟರ್ ಗೆ ಹನಿ ಡ್ರಾಪ್ ಮಾಡಿ ಲಕ್ಷಾಂತರ ಹಣವನ್ನ ದೋಚಿದ್ದ ಹನಿ ಟ್ರ್ಯಾಪ್ ಗ್ಯಾಂಗನ್ನ ಬಂಧಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಯನ ಸಂತೋಷ್ ಅಜಯ್ ಹಾಗೂ ಜಯರಾಜ್ ಬಂಧಿತ ಆರೋಪಿಗಳು, ಸಿವಿಲ್ ಕಂಟ್ರಾಕ್ಟರ್ ಒಬ್ಬರನ್ನ ಪರಿಚಯ ಮಾಡಿಕೊಂಡಿದ್ದ ನಯನ ಅವರನ್ನು ಟೀ ಕುಡಿಯುವ ನೆಪದಲ್ಲಿ ಮನೆಗೆ ಕರೆಸಿಕೊಂಡು ಹನಿ ಟ್ರ್ಯಾಪ್ ಮಾಡಿದ್ದರು. ಅವರ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡಿ ಲಕ್ಷಾಂತರ ಹಣವನ್ನ ದೋಚಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಇಂದು ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave a Reply