Breaking
20 Sep 2026, Sun

ರಾಜಾಪುರ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯ ಕೊಲೆ, ಜಿಗಣಿ ಪೊಲೀಸರಿಂದ ಆರೋಪಿಯ ಬಂಧನ

ಆನೇಕಲ್ ತಾಲೂಕಿನ ರಾಜಾಪುರದಲ್ಲಿ ಕುಡಿದ ಮತ್ತಿನಲ್ಲಿ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ, ಆರೋಪಿ ಮಾದೇಶ್ ಎಂಬಾತನನ್ನ ಬಂಧಿಸಿದ ಜಿಗಣೆ ಪೊಲೀಸರು ಆನೇಕಲ್ ತಾಲೂಕಿನ ರಾಜಪುರ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಸ್ನೇಹಿತನಿಂದಲೇ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ. ಜಗದೀಶ್ ಕೊಲೆಯಾದ ದುರ್ದೈವಿ, ಜಗದೀಶ್ ಸ್ನೇಹಿತ ಮಾದೇಶ್ ಎಂಬಾತನ ಜೊತೆ ಮಧ್ಯಪಾನ ಮಾಡಿದ್ದ ಜಗದೀಶ್ ಬಳಿಕ ಜಗಳವಾಡಿಕೊಂಡಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಜಗದೀಶನನ್ನ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿ ಮಾದೇಶನನ್ನ ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply