Breaking
20 Sep 2026, Sun

ಇಂಡ್ಲವಾಡಿ ಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎತ್ತುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮ

ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ಈ ಬಾರಿ ಸಂಕ್ರಾಂತಿಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಸಿಂಗರಿಸಿದ ಎತ್ತುಗಳನ್ನು ಕಿಚ್ಚು ಹಾಯಿಸುವ ಮೂಲಕ ಹಬ್ಬಕ್ಕೆ ಮತ್ತಷ್ಟು ಮೆರಗು ತಂದುಕೊಡಲಾಯಿತು. ಹೋರಿಗಳು ಬೆಂಕಿಯನ್ನು ನೋಡಿ ಬೆದರದೇ ಇರಲೆಂದು ಕಿಚ್ಚು ಹಾಯಿಸುವ ಸಂಪ್ರದಾಯ ಹಲವು ದಶಕಗಳಿಂದ ರೂಢಿಯಲ್ಲಿದೆ ಹೀಗಾಗಿ ಗ್ರಾಮದ ರೈತರು ಒಟ್ಟಾಗಿ ಸೇರಿ ತಮ್ಮ ಸಿಂಗರಿಸಿದ ಎತ್ತುಗಳನ್ನು ಬೆಂಕಿಯಲ್ಲಿ ಹಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.

Leave a Reply