Breaking
10 Feb 2026, Tue

ಸೋಂಪುರ ಬಳಿ ಸಂಕ್ರಾಂತಿ ಪ್ರಯುಕ್ತ ಕಡಲೇಕಾಯಿ ಪರಿಷೆ

ಬೆಂಗಳೂರು ಹೊರ ವಲಯದ ಸೋಂಪುರ ಗ್ರಾಮದಲ್ಲಿ ಸಂಕ್ರಾಂತಿ ಪ್ರಯುಕ್ತ ಕಡಲೆಕಾಯಿ ಪರಿಷೆ ಆಯೋಜನೆ ಮಾಡಲಾಗಿತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ , ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಸವೇಶ್ವರ ದೇವಾಲಯದ ವತಿಯಿಂದ ಬ್ರಹ್ಮರಥೋತ್ಸವವನ್ನು ನಡೆಸಿ ಸಾರ್ವಜನಿಕರಿಗೆ ಉಚಿತವಾಗಿ ಕಬ್ಬು ಹಾಗೂ ಕಡಲೆಕಾಯಿ ವಿತರಣೆ ಮಾಡಲಾಯಿತು. 500 ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಮೆರಗು ತಂದುಕೊಡಲಾಯಿತು. ಜಗತ್ತಿನಲ್ಲಿ ಸಂಪ್ರದಾಯ ಆಚರಣೆಗಳು ಬದಲಾವಣೆಯಾದರೂ ಭಾರತದಲ್ಲಿ ಮಾತ್ರ ಪ್ರಾಚೀನ ಸಂಸ್ಕೃತಿ ಪರಂಪರೆ ಎಂದಿಗೂ ಜೀವಂತವಾಗಿದೆ ಎಂಬುದಕ್ಕೆ ಇಲ್ಲಿನ ಸಂಕ್ರಾಂತಿ ಆಚರಣೆ ಉತ್ತಮ ನಿರ್ದೇಶನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಿಳಿಸಿದರು. ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ರುದ್ರೇಶ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು

Leave a Reply