ಆನೇಕಲ್ ತಾಲೂಕಿನ ಗುಡ್ಡಳ್ಳಿ ಗ್ರಾಮದಲ್ಲಿ ಗಾಳಿ ಸಹಿತ ಭಾರಿ ಮಳೆಯಿಂದ ಬೃಹತ್ ಗಾತ್ರದ ಹುಣಸೇ ಮರವೊಂದು ಹೊಸೂರು ಮುಖ್ಯ ರಸ್ತೆಗೆ ಉರುಳಿ ಬಿದ್ದಿದೆ.
ಪರಿಣಾಮ ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆನೇಕಲ್ ನಿಂದ ಹೊಸೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ಮರ ಬಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬಳಿಕ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಮರವನ್ನ ತೆರವುಗೊಳಿಸಲು ಕಾರ್ಯಾಚರಣೆ ನಡೆಸಿದರು
ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

