Breaking
20 Sep 2026, Sun

ಆನೇಕಲ್‌ ಪಟ್ಟಣದಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವರ ಒಣ ಕರಗ ಮಹೋತ್ಸವ

ಆನೇಕಲ್‌ ಪಟ್ಟಣದ ಐತಿಹಾಸಿಕ ಶ್ರೀ ಧರ್ಮರಾಯಸ್ವಾಮಿ ದೇವರ ಒಣಕರಗ ಮಹೋತ್ಸವ ಇಂದು ಮುಂಜಾನೆ ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆ 3 ಗಂಟೆಗೆ ದೇವಾಲಯದಿಂದ ಹೊರಟ ಒಣಕರಗ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿತು. ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ಭಕ್ತಾದಿಗಳು ಮಲ್ಲಿಗೆ ಹೂಗಳನ್ನು ಹಾಕಿ ಕರಗಕ್ಕೆ ನಮನ ಸಲ್ಲಿಸಿದರು.

ಜೊತೆಗೆ ಹಲವು ಪ್ರಮುಖ ವೃತ್ತಗಳಲ್ಲಿ ನಾದಸ್ವರಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕರಗ ಭಕ್ತಾದಿಗಳ ಭಕ್ತಿ ಭಾವಕ್ಕೆ ಕಾರಣವಾಯಿತು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply