Breaking
18 Jul 2026, Sat

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸ್ವಪ್ನ ಬುಕ್ ಹೌಸ್ ನ 24ನೇ ಶಾಖೆ ಉದ್ಘಾಟನೆ

ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವ ಎಂ5 ಮಾಲ್ ನಲ್ಲಿ ಪ್ರಸಿದ್ಧ ಸ್ವಪ್ನ ಬುಕ್ ಹೌಸ್‌ನ 24ನೇ ಶಾಖೆ ಉದ್ಘಾಟನೆಯಾಗುವ ಮೂಲಕ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಪುಸ್ತಕ ಪ್ರೇಮಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.

ಇತ್ತೀಚಿಗೆ ದಿನಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅದಕ್ಕೆ ಪೂರಕವಾಗಿ ಉತ್ತಮ ಪುಸ್ತಕಗಳನ್ನು ಓದುಗರಿಗೆ ಒದಗಿಸುವ ಹಿತದೃಷ್ಟಿಯಿಂದ ಸ್ವಪ್ನ ತನ್ನ 24 ನೇ ಶಾಖೆಯಲ್ಲಿ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತೆರೆಯುವ ಮೂಲಕ ಓದುಗರ ಗಮನವನ್ನ ತಮ್ಮತ್ತ ಸೆಳೆಯುವಂತೆ ಮಾಡಿದೆ

ಸಪ್ನ ಬುಕ್‌ಹೌಸ್‌ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಮಾತನಾಡಿ, ಸಪ್ನ ಬುಕ್‌ಹೌಸ್ ಮಕ್ಕಳು ವಿದ್ಯಾರ್ಥಿಗಳು ಒಳಗೊಂಡಂತೆ ಎಲ್ಲ ರೀತಿಯ ಓದುಗರ ಸದಾಭಿರುಚಿಗೆ ಅನುಗುಣವಾಗಿ ಪುಸ್ತಕಗಳು, ಸ್ಟೇಷನರಿ, ಕ್ರೀಡಾ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕನ್ನಡ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದಕ್ಕೆ ಪೂರಕವಾಗಿ ಸಪ್ನ ಬುಕ್ ಹೌಸ್ ಕೂಡ ಹೊಸ ಲೇಖಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯದಲ್ಲಿ ನಿರತವಾಗಿದೆ.

ಬೆಂಗಳೂರು ಕೇಂದ್ರಿತವಾಗಿದ್ದ ಪುಸ್ತಕ ಮಾರಾಟ ಮಳಿಗೆಗಳು ದೂರ ದೂರದ ಪ್ರದೇಶಗಳಿಗೂ ವಿಸ್ತರಣೆಯಾಗುತ್ತಿರುವುದು ಜೊತೆಗೆ ಉತ್ತಮ ಪುಸ್ತಕಗಳು ಓದುಗರನ್ನು ತಲುಪುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಅವರು ತಿಳಿಸಿದರು.

ಈ ವೇಳೆ ಹಿರಿಯ ಕವಿ ಬಿ.ಆರ್.ಲಕ್ಷ್ಮಣ್ ರಾವ್, ಹಿರಿಯ ಪತ್ರಕರ್ತ ಜೋಗಿ, ರಾ.ನಂ.ಚಂದ್ರಶೇಖರ್, ಎಚ್.ಡುಂಡಿರಾಜ್, ಎಂ.ಎಸ್.
ನರಸಿಂಹಮೂರ್ತಿ, ಸಪ್ನ ಬುಕ್ ಹೌಸ್ ದೊಡ್ಡೇಗೌಡ, ಮಹೇಂದ್ರ ಗ್ರೂಪ್ ಅಧ್ಯಕ್ಷ ಬಿ.ಟಿ.ನಾಗರಾಜ್‌ರೆಡ್ಡಿ, ಹಿರಿಯ ಪತ್ರಕರ್ತರಾದ ಸುದರ್ಶನ ಚನ್ನಂಗಿಹಳ್ಳಿ ಸೇರಿದಂತೆ ಹಲವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿದ್ದರು.

Leave a Reply