Breaking
20 Sep 2026, Sun

ಮಾಯಸಂದ್ರ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿದ ಶ್ರೀ ಧರ್ಮರಾಯಸ್ವಾಮಿ ಒಣ ಕರಗ ಮಹೋತ್ಸವ

ಆನೇಕಲ್‌ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಶ್ರೀ ಧರ್ಮರಾಯ ಸ್ವಾಮಿ ದೇವರ ಒಣಕರದ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು.

ಆನೇಕಲ್ ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಒಣ ಕರಗ ಮಹೋತ್ಸವವನ್ನು ವೀಕ್ಷಣೆ ಮಾಡಿದರು.

ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿದ ಕರಗಕ್ಕೆ ಮಲ್ಲಿಗೆ ಹೂಗಳ ಸ್ವಾಗತ ಕೋರಲಾಯಿತು. ನಾದಸ್ವರದ ನಾದಕ್ಕೆ ತಕ್ಕಂತೆ ಕರಗ ಹೆಜ್ಜೆ ಹಾಕಿ ಭಕ್ತರ ಭಕ್ತಿ ಭಾವಕ್ಕೆ ಸಾಕ್ಷಿಯಾಯಿತು.

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply