Breaking
20 Sep 2026, Sun

ತೆಲಗರಹಳ್ಳಿ ಅದ್ದೂರಿಯಾಗಿ ನಡೆದ ಶ್ರೀ ಧರ್ಮರಾಯಸ್ವಾಮಿ ಒಣಕರಗ ಮಹೋತ್ಸವ

ಆನೇಕಲ್‌ ತಾಲೂಕಿನ ತೆಲಗರಹಳ್ಳಿ ಗ್ರಾಮದಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವರ ಒಣ ಕರಗ ಮಹೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆ ದೇವಾಲಯದಿಂದ ಹೊರಬಂದ ಕರಗ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಂಚರಿಸಿತು. ಕರಗ ಹೋದ ಕಡೆಯಲ್ಲೆಲ್ಲಾ ಗ್ರಾಮಸ್ಥರು ಮಲ್ಲಿಗೆ ಹೂವು ಹಾಕುವ ಮೂಲಕ ಕರಗವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ನಾದಸ್ವರದ ನಾದಕ್ಕೆ ತಕ್ಕಂತೆ ಕರಗ ಹೆಜ್ಜೆ ಹಾಕಿ ಗ್ರಾಮಸ್ಥರಿಗೆ ಮನೋರಂಜನೆ ನೀಡಿತು. ತಾಲೂಕಿನ ವಿವಿಧ ಭಾಗಗಳಿಂದ ಭಕ್ತಾದಿಗಳು ತೆಲಗರಹಳ್ಳಿಗೆ ಆಗಮಿಸಿ ಒಣ ಕರಗವನ್ನು ಕಣ್ಣುಂಬಿಕೊಂಡರು

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply