ಆನೇಕಲ್: ಹಾರಗದ್ದೆ ವ್ಯವಸಾಯ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನಟರಾಜ್, ಉಪಾಧ್ಯಕ್ಷರಾಗಿ ಸೀತನಾಯಕನಹಳ್ಳಿ ಶ್ರೀನಿವಾಸ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಹಾರಗದ್ದೆ ವ್ಯಾವಸಾಯ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದೆ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ನಟರಾಜ್ ಹಾಗೂ ಉಪಾಧ್ಯಕ್ಷರಾಗಿ ಸೀತನಾಯಕನಹಳ್ಳಿ ಶ್ರೀನಿವಾಸ್ ಅವಿರೋಧವಾಗಿ ಅಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೂತನ ಅಧ್ಯಕ್ಷ ನಟರಾಜ್ ಮಾತನಾಡಿ, ಹಾರಗದ್ದೆ ವ್ಯವಸಾಯ ಸಂಘದ ಎಲ್ಲ ಸದಸ್ಯರ ಒಮ್ಮತದ ತೀರ್ಮಾನದಂತೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಲಾಗಿದೆ. ರೈತರು ಹಾಗೂ ಕೃಷಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ಹಾರಗದ್ದೆ ವ್ಯವಸಾಯ ಸಂಘವನ್ನು ಮಾದರಿ ಸಂಸ್ಥೆಯಾಗಿ ರೂಪಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಹಾರಗದ್ದೆ ಗ್ರಾಮ ಪಂಚಾಯತಿ ಸದಸ್ಯರು, ಗೊಲ್ಲಹಳ್ಳಿ ವೆಂಕಟಸ್ವಾಮಿ, ಎನ್‌ಬಿಐ ನಾಗರಾಜು, ಸಿ.ನಾಗರಾಜು, ಟಿಎಪಿಸಿಎಮ್‌ಎಸ್ ತಾಲ್ಲೂಕು ಆಧ್ಯಕ್ಷ ಬಾಬುರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಸಿಎನ್ ರವಿ, ಹಾರಗದ್ದೆ ಆಶ್ವಥ್, ಸೀತನಾಯಕನಹಳ್ಳಿ ವೆಂಕಟಸ್ವಾಮೀ, ಕೋನಸಂದ್ರ ದೇವರಾಜು, ಸಂದೀಪ್, ಮಂಜುನಾಥ್, ಗೀರೀಶ್, ಲಕ್ಷಣ್, ಎ.ರಾಜಪ್ಪ, ಬಿ.ನಾಗರಾಜು, ತಿಮ್ಮರಾಯಪ್ಪ, ಹಾಗೂ ಶಾಖೆಯ ಮುಖ್ಯ ಅಧಿಕಾರಿ ಪ್ರಕಾಶ್ ಹಾಗೂ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

