Breaking
20 Sep 2026, Sun

ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿದ್ದ ಅಕ್ರಮ ಕಟ್ಟಡಗಳ ನೆಲಸಮ

ಆನೇಕಲ್ ತಾಲೂಕಿನ ದೊಮ್ಮಸಂದ್ರ ಸರ್ಕಲ್ ನಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿದ್ದ ಅಕ್ರಮ ಕಟ್ಟಡಗಳನ್ನ ಕಂದಾಯ ಅಧಿಕಾರಿಗಳು ಇಂದು ತೆರವು ಮಾಡಿದ್ದಾರೆ

ತಿಗಳ ಚೌಡದೇನಹಳ್ಳಿ ಗ್ರಾಮದ ಸರ್ವೆ ನಂಬರ್ 81 ನಲ್ಲಿ 21ಗುಂಟೆ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿ 20 ವರ್ಷಗಳಿಂದ ಬಾಡಿಗೆ ತೆಗೆದುಕೊಳ್ಳಲಾಗುತ್ತಿತ್ತು.

ಸರ್ಕಾರಿ ಜಾಗದಲ್ಲಿ ಹೋಟೆಲ್, ಗ್ಯಾರೇಜ್, ಟೆಲಿಪೋನ್ ಟವರ್, ದೇವಸ್ಥಾನ, ಕಟ್ಟಿಕೊಂಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಂದಾಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು

ಹೀಗಾಗಿ ಇಂದು ಸರ್ಜಾಪುರ ಉಪತಹಶಿಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ಕಂದಾಯ ಅಧಿಕಾರಿಗಳ ತಂಡ ಆಕ್ರಮ ಕಟ್ಟಡಗಳನ್ನು ಜೆಸಿಬಿ ಮೂಲಕ ನೆಲಸಮ ಮಾಡಿದ್ದಾರೆ. ಆ ಮೂಲಕ ಸರ್ಕಾರಿ ಜಾಗಗಳನ್ನ ಒತ್ತುವರಿ ಮಾಡುವವರಿಗೆ ಕಠಿಣ ಸಂದೇಶ ರವಾನೆ ಮಾಡಿದ್ದಾರೆ

ಅಕ್ಷಯ ಟಿವಿಯಲ್ಲಿ ಇನ್ನಷ್ಟು ಸ್ಥಳೀಯ ಸುದ್ದಿಗಳನ್ನು ಪಡೆಯಲು ಅಕ್ಷಯ ಟಿವಿ ವೆಬ್‌ಸೈಟ್ ನಲ್ಲಿ ಬೆಲ್ ಐಕಾನ್ ಒತ್ತಿ.. ಅಕ್ಷಯ ಟಿವಿಯನ್ನು ಬೆಂಬಲಿಸಿ..

Leave a Reply